ತಂಬೂರಿ ಗುರುಬಸವಯ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ: ಅಭಿನಂದನೆ90 ವರ್ಷದ ಗುರುಬಸವಯ್ಯ ಅವರು ನೀಲಗಾರರ ಪರಂಪರೆಯಿಂದ ಬಂದ ಅಪ್ಪಟ ದೇಶಿ ಜಾನಪದ ಕಲಾವಿದ. ಶಿಕ್ಷಣ ಇಲ್ಲದಿದ್ದರೂ ಮಂಟೆಸ್ವಾಮಿ ಮಹಾಕಾವ್ಯ, ಬಸವಣ್ಣನ ವಚನ, ಗಣಪತ್ ರಾಜನ ಕಥೆ, ಚನ್ನಿಗರಾಮ ಕಥೆ, ಮಹದೇಶ್ವರರ ಕಥೆಗಳನ್ನು ತಂಬೂರಿ ಬಾರಿಸುತ್ತಾ ನಿರಂತರವಾಗಿ ಜಾನಪದ ದಾಟಿಯಲ್ಲಿ ಹಾಡುವುದು ವಿಶೇಷ.