ಈ ಆಸ್ಪತ್ರೆಗೆ ಬಂದ್ರೆ ರೋಗ ಬರೋದು ಗ್ಯಾರಂಟಿ..!ಆರೋಗ್ಯ ಕೇಂದ್ರದಲ್ಲಿ ನೌಕರರಿದ್ದರೂ ಆವರಣದಲ್ಲಿ ಅಶುಚಿತ್ವವಿದೆ. ಹಳ್ಳಿಯ ಜನರು ಜ್ವರ, ಅಪಘಾತ ಹಾಗೂ ಇನ್ನಿತರ ಘಟನೆಗಳು ನಡೆದಾಗ ಕೂಡಲೇ ಆಸ್ಪತ್ರೆಗೆ ಬರುವುದು ಸಾಮಾನ್ಯ. ಆದರೆ, ಆಸ್ಪತ್ರೆಯಲ್ಲಿ ತಲೆ, ಮೈಕೈನೋವು, ಕೆಮ್ಮು, ನೆಗಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾದರೂ ತುರ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ.