ಎಚ್ ಡಿಕೆ ಜನತಾದರ್ಶನ: ಕಾರ್ಯಕರ್ತರದ್ದೇ ಕಾರುಬಾರುಪೊಲೀಸರು ಮುಖಂಡರು-ಕಾರ್ಯಕರ್ತರನ್ನು ನಿಯಂತ್ರಿಸಲಾಗದೇ ಅಸಹಾಯಕರಾದರು. ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ತಮ್ಮ ಆಸನಗಳಲ್ಲಿ ಆಸೀನರಾಗಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಮೈಕ್ ಹಿಡಿದು ಹಲವಾರು ಬಾರಿ ಕಾರ್ಯಕರ್ತರನ್ನು ವೇದಿಕೆ ಬಿಟ್ಟು ಕೆಳಗಿಳಿಯುವಂತೆ ಮನವಿ ಮಾಡುತ್ತಿದ್ದರೂ ಅವರ ಮಾತಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ. ಪರಿಣಾಮ ಜನತಾದರ್ಶನ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.