ಕಲಬೆರಕೆ ಹಾಲು ಆರೋಗ್ಯಕ್ಕೆ ಮಾರಕ, ಶಿಕ್ಷಾರ್ಹ ಅಪರಾಧ: ಮನ್ಮುಲ್ ನಿರ್ದೇಶಕ ಡಾಲುರವಿರಾಜ್ಯದಲ್ಲಿಯೇ ಮಂಡ್ಯ ಗುಣಮಟ್ಟದ, ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ರೈತರ ಪರಿಶ್ರಮ ಇದರಲ್ಲಿ ಸಾಕಾಷ್ಟಿದೆ. ಗುಣಮಟ್ಟದ ಹಾಲು ಸರಬರಾಜು ಮಾಡಿ 5 ರು.ಗಳಷ್ಟು ಪ್ರೋತ್ಸಾಹಧನ ಪಡೆಯಿರಿ. ಗ್ರಾಮಾಭಿವೃದ್ಧಿ ಜತೆಗೆ ವೈಯಕ್ತಿಕ ಆರ್ಥಿಕ ಅಭಿವೃದ್ಧಿ ಹೊಂದಬೇಕು. ಡಿಗ್ರಿ, ಕೊಬ್ಬಿನ ಅಂಶ ಸಿಗಲಿ ಎಂದು ಹಲವು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತು, ರಾಸಾಯನಿಕ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ.