ಮಂಡ್ಯ: ವರ್ತುಲ ರಸ್ತೆಗೆ ‘ಎರಡು ಪ್ಲಾನ್’ ಸಿದ್ಧ...!ಮಂಡ್ಯ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ವಿಷಯ ಆಗಾಗ ಸದ್ದು ಮಾಡುತ್ತಲೇ ಬರುತ್ತಿದೆ. ಮತ್ತೆ ಈಗ ಅದು ಮುನ್ನಲೆಗೆ ಬಂದಿದೆ. ಕೇಂದ್ರ ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ೯೦೦ ಕೋಟಿ ರು. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಆದರೆ, ವರ್ತುಲ ರಸ್ತೆಗೆ ರೂಪಿಸಿರುವ ಎರಡು ನೀಲಿ ನಕಾಶೆಗಳಲ್ಲಿ ಯಾವುದು ಜಾರಿಗೆ ಬರಲಿದೆ ಎನ್ನುವುದು ಈಗ ಎಲ್ಲರ ಕುತೂಹಲ ಕೆರಳಿಸಿದೆ.