ಜಿಟಿ ಜಿಟಿ ಮಳೆಗೆ ಮಂಡ್ಯ ಫುಲ್ ಕೂಲ್ ಕೂಲ್..!ಮೋಡ ಕವಿದ ವಾತಾವರಣ, ತುಂತುರು ಹನಿಗಳ ಸಿಂಚನ, ಆಗಾಗ ಸುರಿಯುವ ಜಿಟಿ ಜಿಟಿ ಮಳೆಯಿಂದ ಸಕ್ಕರೆ ಸೀಮೆ ಮಲೆನಾಡಾಗಿ ಪರಿವರ್ತನೆಗೊಂಡಿದೆ. ಎಲ್ಲೆಡೆ ತಂಪಾದ ವಾತಾವರಣ ನೆಲೆಸಿದ್ದು, ಇಡೀ ಮಂಡ್ಯ ಕೂಲ್ ಕೂಲ್ ಆಗಿದೆ. ಕಳೆದ ವರ್ಷ ಬರದಿಂದ ನಲುಗಿಹೋಗಿದ್ದ ಮಂಡ್ಯ ಜಿಲ್ಲೆ ಜನರಿಗೆ ಈ ವರ್ಷದ ವರುಣಾಗಮನ ಹಿತಕರವಾದ ಅನುಭವ ನೀಡಿದೆ.