ಮಾಜಿ ಸಂಸದ ದಿ.ಜಿ.ಮಾದೇಗೌಡರ 3ನೇ ವರ್ಷದ ಪುಣ್ಯಸ್ಮರಣೆ ನಮ್ಮ ತಾತ ಜಿ.ಮಾದೇಗೌಡರು ಜಿಲ್ಲೆಯನ್ನು ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಆರೋಗ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದಾರೆ. ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲೇ ಪ್ರಾಣತೆತ್ತಿದ್ದಾರೆ. ಅವರ ಸಾಧನೆ ಅಮರವಾಗಿದೆ. ಇಂದಿಗೂ ಕೂಡ ಅಭಿಮಾನಿಗಳು, ಕಾರ್ಯಕರ್ತರು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿರುವುದೇ ಅವರು ಮಾಡಿರುವ ಕೆಲಸಗಳಿಗೆ ಸಾಕ್ಷಿಯಾಗಿದೆ.