ಶೂನ್ಯ ಬಡ್ಡಿಯಲ್ಲಿ 19.97 ಲಕ್ಷ ರೈತರಿಗೆ₹15,841 ಕೋಟಿ ವಿತರಣೆ: ದಿನೇಶ್ಪ್ರಸಕ್ತ ಆರ್ಥಿಕ ವರ್ಷದಲ್ಲಿ 21 ಡಿಸಿಸಿ ಬ್ಯಾಂಕ್ ಹಾಗೂ 6,040 ಕೃಷಿ ಪತ್ತಿನ ಸಹಕಾರ ಸಂಘಗಳಿಂದ ₹24,600 ಕೋಟಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ ಜನವರಿವರೆಗೆ 19.97 ಲಕ್ಷ ರೈತರಿಗೆ 15,841.48 ಕೋಟಿ ಸಾಲ ನೀಡಲಾಗಿದೆ. ಕಳೆದ ಅವಧಿಗಿಂತ ಹೆಚ್ಚುವರಿಯಾಗಿ 776.48 ಕೋಟಿ ಸಾಲ ನೀಡಲಾಗಿದೆ.