ಪುಸ್ತಕ ಮನೆಯಲ್ಲಿ ಶ್ರೀರಾಮನ ಮಿನಿ ಮ್ಯೂಸಿಯಂ ಸೃಷ್ಟಿ..!ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಅಂಕೇಗೌಡರ ಪುಸ್ತಕ ಮನೆ ಇದೀಗ ಶ್ರೀರಾಮನ ಮಿನಿ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಶ್ರೀರಾಮನ ಕುರಿತ ಸಹಸ್ರಾರು ಪುಸ್ತಕಗಳು, ನಾಣ್ಯಗಳು, ಫೋಟೋಗಳು, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಸೇರಿದಂತೆ ಹಲವಾರು ಭಾಷೆಗಳಲ್ಲಿರುವ ಶ್ರೀರಾಮನ ಪುಸ್ತಕಗಳು ಜನರನ್ನು ಆಕರ್ಷಿಸುತ್ತಿವೆ. ಇವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೊರತಂದಿದ್ದ ನಾಣ್ಯಗಳು ಇವೆ.