ಪಿಎಲ್ಡಿ ಬ್ಯಾಂಕ್ನಲ್ಲಿ ೮.೪೨ ಕೋಟಿ ರು. ಸಾಲ ಬಾಕಿ: ಬೇಲೂರು ಸೋಮಶೇಖರ್ಬಡ್ಡಿ ಮನ್ನಾ ಕುರಿತಂತೆ ಜ.೨೦ರಂದು ಸರ್ಕಾರ ಆದೇಶ ಹೊರಡಿಸಿದೆ. ಸುಸ್ತಿದಾರ ರೈತರು ಫೆ.೨೯ರೊಳಗೆ ಸಾಲದ ಹಣವನ್ನು ಪಾವತಿ ಮಾಡಬೇಕು. ಮಂಡ್ಯ ಪಿಕಾರ್ಡ್ (ಪಿಎಲ್ಡಿ) ಬ್ಯಾಂಕ್ನಲ್ಲಿ ಒಟ್ಟು ೨೮೦೦ ಸುಸ್ತಿದಾರರಿದ್ದಾರೆ, ಒಟ್ಟು ೮.೪೨ ಕೋಟಿ ರು. ಬಾಕಿ ಬರಬೇಕಾಗಿದ್ದು, ರೈತರು ೪.೨೦ ಕೋಟಿ ರು. ಅಸಲು ಮರು ಪಾವತಿಸಿದರೆ, ಬ್ಯಾಂಕಿಗೆ ಸರ್ಕಾರ ಬಡ್ಡಿ ಮನ್ನಾ ರೂಪದಲ್ಲಿ ೪.೨೨ ಕೋಟಿ ರು.ನೀಡಲಿದೆ.