ಮಂಡ್ಯದಲ್ಲಿ ನಾಳೆಯಿಂದ ಸಸ್ಯಕಾಶಿಯಲ್ಲಿ ಫಲ ಪುಪ್ಪ ಪ್ರದರ್ಶನಪ್ರತಿ ವರ್ಷ ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಮೂಡಿಬರುವಂತೆ ಆಯೋಜಿಸುತ್ತಿದ್ದು, ಈ ಸಾಲಿನಲ್ಲಿ ಮತ್ತಷ್ಟು ಮೆರುಗು ಹಾಗೂ ವಿಶೇಷತೆಗಳೊಂದಿಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳಲ್ಳುವ ವಿವಿಧ ಬಣ್ಣದ ಹೂ, ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು, ಪೌಷ್ಟಿಕ ಕೈತೋಟ ಮಾದರಿ, ಇಕೆಬನ ಹಾಗೂ ತರಕಾರಿ ಕೆತ್ತೆ ಪ್ರದರ್ಶನ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯಮಯ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.