ಶಿಕ್ಷಣ ಮಕ್ಕಳ ಬದುಕಿನ ಹಕ್ಕಾಗಲಿ ಎಂದಿದ್ದ ಭೈರವೈಕ್ಯ ಸ್ವಾಮೀಜಿ: ಜೆ.ಎನ್ .ರಾಮಕೃಷ್ಣೇಗೌಡಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಈ ದೂರದೃಷ್ಟಿಯಿಂದ ಆದಿಚುಂಚನಗಿರಿ ಶ್ರೀಮಠದಿಂದ ಹಳ್ಳಿಗಳಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸಲಾಯಿತು. ವಸತಿ, ಶಿಕ್ಷಣ, ಆರೋಗ್ಯ, ಅನ್ನದಾಸೋಹದ ಪರಿಕಲ್ಪನೆಯ ಮಠದ ಆಶಯಕ್ಕೆ ಸಹಕರಿಸಬೇಕು. ಮಕ್ಕಳ ಸೂಪ್ತ ಕೌಶಲ್ಯತೆಯನ್ನು ಟಿವಿ, ಮೊಬೈಲ್ ಕಸಿಯುತ್ತಿದೆ. ಕನ್ನಡ ಶಾಲೆ ಉಳಿದರೆ ಧಮನಿತ ವರ್ಗ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಮಕ್ಕಳ ಶಿಕ್ಷಣಕ್ಕೆ ಭೈರವೈಕ್ಯರ ಆಶೀರ್ವಾದವಿದೆ.