ಸುಗ್ಗಿ ಸಂಕ್ರಾಂತಿ ಹಬ್ಬದ ಅಗತ್ಯ ವಸ್ತುಗಳ ಖರೀದಿ ಜೋರು..!ಹಲಗೂರು ಪ್ರಮುಖ ವೃತ್ತದಿಂದ ಚನ್ನಪಟ್ಟಣ ರಸ್ತೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಗೆಣಸು, ಕಬ್ಬು, ಅವರೇಕಾಯಿ, ಕಡಲೇಕಾಯಿ, ವಿವಿಧ ಬಗೆಯ ಸೊಪ್ಪು, ಹೂ, ಹಣ್ಣುಗಳ ಖರೀದಿ ಭರಾಟೆ, ವಸ್ತುಗಳ ಬೆಲೆ ಏರಿಕೆ ನಡುವೆ ಜನರು ಸಂಕ್ರಾಂತಿ ಹಬ್ಬಕ್ಕಾಗಿ ಕಡ್ಲೆಬೀಜ, ಸಕ್ಕರೆ ಅಚ್ಚು, ಕೊಬ್ಬರಿ, ಬೆಲ್ಲ, ಅವರೆ, ತರಕಾರಿ, ಹೂ ಸೇರಿದಂತೆ ರಾಸುಗಳನ್ನು ಸಿಂಗರಿಸಲು ವಸ್ತುಗಳನ್ನು ಕೊಳ್ಳುತ್ತಿದ್ದರು.