ಮಂಡ್ಯದಿಂದ ಎಚ್ಡಿಕೆ, ನಿಖಿಲ್ ಸ್ಪರ್ಧೆಗೆ ಒತ್ತಡಲೋಕಸಭೆ ಚುನಾವಣೆಗೆ ನಾನು ಮತ್ತು ನನ್ನ ಮಗ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿಕೊಂಡೇ ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಂದ ತಮ್ಮ ಮೇಲೆ ಒತ್ತಡ ಬೀರುವಂತೆ ಮಾಡಿ ಮಂಡ್ಯ ಅಖಾಡ ಪ್ರವೇಶಿಸುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ವತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.