ಹಲಗೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಖಾತೆಯಾಗಿದ್ದ ೧೧ ನಿವೇಶನಗಳು ರದ್ದು...!ಸರ್ವೆ ನಂ.೬೩ರಲ್ಲಿ ೩.೨೯ ಎಕರೆ ಜಮೀನಿನಲ್ಲಿ ೫ ಗುಂಟೆ ಬಿ-ಖರಾಬು ಜಮೀನನ್ನು ಸೇರಿಸಿ ಅಕ್ರಮ ಖಾತೆ ಮಾಡಿರುವುದಲ್ಲದೇ, ಸರ್ವೆ ನಂ.೬೪ರಲ್ಲಿ ೨ ಗುಂಟೆ ಖರಾಬು ಸೇರಿಸಿ ೭೪ ಗುಂಟೆ ಜಮೀನಿಗೆ ಸರ್ವೆ ನಂ.೬೩ರಲ್ಲಿ ಮಂಜೂರಾಗಿದ್ದ ಅನ್ಯಕ್ರಾಂತ ಆದೇಶವನ್ನು ತಿದ್ದಿ ಅಕ್ರಮ ಖಾತೆ ಮಾಡಿಸಿಕೊಂಡು ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಬಗ್ಗೆ ಸೆ.4 ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.