ನ್ಯಾಯಾಲಯದ ಆದೇಶ ಉಲ್ಲಂಘನೆ, ಮರಳಿಗ ಗ್ರಾಪಂ ಆಸ್ತಿ ಜಪ್ತಿಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ 2009ರ ನವೆಂಬರ್ 21ರಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು. ಗಂಡನ ಸಾವಿಗೆ ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಪರಿಹಾರ ಕೋರಿ ರವಿ ಪತ್ನಿ ಸುಜಾತ ಮನವಿ ಸಲ್ಲಿಸಿದ್ದರು. ಆನಂತರ ಗ್ರಾಪಂ ಪಿಡಿಒ ಹಾಗೂ ಜನಪ್ರತಿನಿಧಿಗಳು ಪರಿಹಾರ ನೀಡದೆ ವಿಳಂಬ ಮಾಡಿದ್ದರು. ಈ ಬಗ್ಗೆ ಸುಜಾತ ತಮ್ಮ ಪರ ವಕೀಲ ಬಿ. ರಾಮಕೃಷ್ಣೇಗೌಡ ಹಾಗೂ ಸಹ ವಕೀಲ ಸುನಿಲ್ ಮೂಲಕ ಮದ್ದೂರು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.