• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮನುಷ್ಯರ ಆರೋಗ್ಯ ಕಾಪಾಡಿದ ಪುಣ್ಯ ರೈತರಿಗೆ ಸಿಗಲಿದೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
ಪೂರಿಗಾಲಿ ಹನಿ ನೀರಾವರಿ ಮೂಲಕ ಸಾವಯವ ಕೃಷಿಯಲ್ಲಿ ಸಾಮೂಹಿಕ ಏಕ ಬೆಳೆ ಬೆಳೆದರೇ ಭೂಮಿ ಹಾಗೂ ಮನುಷ್ಯರ ಆರೋಗ್ಯವನ್ನು ಕಾಪಾಡಿದ ಪುಣ್ಯ ರೈತರಿಗೆ ಸಿಗಲಿದೆ. ಮಳೆಯನ್ನೇ ನಂಬಿದ ಬಹುತೇಕ ಪ್ರದೇಶಗಳಿಗೆ ಹಲವಾರು ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬೊಪ್ಪೇಗೌಡನಪುರ(ಬಿ.ಜಿ.ಪುರ) ಹೋಬಳಿಗೆ ನೀರಾವರಿ ಕಲ್ಪಿಸುವ ಈ ಯೋಜನೆ ಜಾರಿ ಮಾಡಲು ಹಲವು ಅಧಿಕಾರಿಗಳು ಕೈಜೋಡಿಸಿದ್ದಾರೆ.
ಮಂಡ್ಯದಲ್ಲಿ ನಾಳೆಯಿಂದ ಸಸ್ಯಕಾಶಿಯಲ್ಲಿ ಫಲ ಪುಪ್ಪ ಪ್ರದರ್ಶನ
ಪ್ರತಿ ವರ್ಷ ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಮೂಡಿಬರುವಂತೆ ಆಯೋಜಿಸುತ್ತಿದ್ದು, ಈ ಸಾಲಿನಲ್ಲಿ ಮತ್ತಷ್ಟು ಮೆರುಗು ಹಾಗೂ ವಿಶೇಷತೆಗಳೊಂದಿಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳಲ್ಳುವ ವಿವಿಧ ಬಣ್ಣದ ಹೂ, ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು, ಪೌಷ್ಟಿಕ ಕೈತೋಟ ಮಾದರಿ, ಇಕೆಬನ ಹಾಗೂ ತರಕಾರಿ ಕೆತ್ತೆ ಪ್ರದರ್ಶನ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯಮಯ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಈಗ 15,41,856 ಮತದಾರರು...!
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2024 ಜನವರಿ 01 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ನಡೆಸಿದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಿದ್ದು, 30183 ಯುವ ಮತದಾರರು ಸೇರ್ಪಡೆ ಮಾಡಲಾಗಿದೆ. ಅವರನ್ನೊಳಗೊಂಡಂತೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1822 ಮತಗಟ್ಟೆಗಳಿದ್ದು, ಒಟ್ಟು 1,54,1856 ಮತದಾರರಿದ್ದಾರೆ.
ಸಡಗರ, ಸಂಭ್ರಮದಿಂದ ನೆರವೇರಿದ ಪುನರ್ವಸು ಉತ್ಸವ
ಕ್ರಿ.ಶ.1017ರ ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ ರಾಮಾನುಜರು ಕಾಡಿನ ನಡುವೆ ಇದ್ದ ಹುತ್ತಕಂಡು ಹಿಡಿದು ಕಲ್ಯಾಣಿ ತೀರ್ಥ ಮತ್ತು ಹಾಲಿನಿಂದ ಹುತ್ತಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪುನರ್ವಸು ಉತ್ಸವ ನೆರವೇರುತ್ತಾ ಬಂದಿದೆ.
ಪಿಎಲ್‌ಡಿ ಬ್ಯಾಂಕ್‌ನಲ್ಲಿ ೮.೪೨ ಕೋಟಿ ರು. ಸಾಲ ಬಾಕಿ: ಬೇಲೂರು ಸೋಮಶೇಖರ್
ಬಡ್ಡಿ ಮನ್ನಾ ಕುರಿತಂತೆ ಜ.೨೦ರಂದು ಸರ್ಕಾರ ಆದೇಶ ಹೊರಡಿಸಿದೆ. ಸುಸ್ತಿದಾರ ರೈತರು ಫೆ.೨೯ರೊಳಗೆ ಸಾಲದ ಹಣವನ್ನು ಪಾವತಿ ಮಾಡಬೇಕು. ಮಂಡ್ಯ ಪಿಕಾರ್ಡ್ (ಪಿಎಲ್‌ಡಿ) ಬ್ಯಾಂಕ್‌ನಲ್ಲಿ ಒಟ್ಟು ೨೮೦೦ ಸುಸ್ತಿದಾರರಿದ್ದಾರೆ, ಒಟ್ಟು ೮.೪೨ ಕೋಟಿ ರು. ಬಾಕಿ ಬರಬೇಕಾಗಿದ್ದು, ರೈತರು ೪.೨೦ ಕೋಟಿ ರು. ಅಸಲು ಮರು ಪಾವತಿಸಿದರೆ, ಬ್ಯಾಂಕಿಗೆ ಸರ್ಕಾರ ಬಡ್ಡಿ ಮನ್ನಾ ರೂಪದಲ್ಲಿ ೪.೨೨ ಕೋಟಿ ರು.ನೀಡಲಿದೆ.
ಕಬಡ್ಡಿ ಕ್ರೀಡಾಪಟುಗಳು ಭಾರತದ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ: ಸಚಿವ ಮಧು ಬಂಗಾರಪ್ಪ
ಕಬಡ್ಡಿ ಒಂದು ಸಾಂಸ್ಕೃತಿಕ ಕ್ರೀಡೆ ಇದ್ದಂತೆ. ಇಂತಹ ಕ್ರೀಡೆಯನ್ನು ಪ್ರೀತಿಸುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. 8 ವರ್ಷಗಳ ನಂತರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ನಮ್ಮ ರಾಜ್ಯದಲ್ಲಿ ಆಯೋಜಿಸಲು ಸಾಧ್ಯವಾಗಿರುವುದು ಅತ್ಯಂತ ಸಂತಸ ತಂದಿದೆ. ಶಿವಮೊಗ್ಗದಲ್ಲಿ ಜ.29ರಂದು ರಾಷ್ಟ್ರ ಮಟ್ಟದ ವಾಲಿಬಲ್ ಪಂದ್ಯಾವಳಿ ನಡೆಯಲಿದೆ. ಈ ಮೂಲಕ ಎರಡು ರಾಷ್ಟ್ರೀಯ ಕ್ರೀಡೆಗಳನ್ನು ರಾಜ್ಯದಲ್ಲಿ ಆಯೋಜಿಸಿರುವುದು ಸಾಕ್ಷಿಯಾಗಲಿದೆ.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ರೈತರಿಂದ ತಹಸೀಲ್ದಾರ್‌ಗೆ ದೂರು
ನೋಂದಣಾಧಿಕಾರಿ ಹಾಗೂ ಸರ್ವೇ ಇಲಾಖೆಗಳಲ್ಲಿ ರೈತರು ಹಾಗೂ ಸಾರ್ವಜನಿಕರ ಕೆಲಸ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ರೈತರು ಹಾಗೂ ಸಾರ್ವಜನಿಕರು ನೇರವಾಗಿ ಕಚೇರಿಗೆ ಬಂದರೆ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಬದಲಾಗಿ ಮಧ್ಯವರ್ತಿಗಳು ಯಾರು ಬಂದಿದ್ದಾರೆ ಎಂದೇ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.
ಗ್ರಾಮೀಣ ಸೊಗಡಿನ ಕಬಡ್ಡಿ ಆಟ ಎಲ್ಲರಿಗೂ ಪ್ರೀತಿಪಾತ್ರವಾದ ಕ್ರೀಡೆಯಾಗಿದೆ: ಚುಂಚನಗಿರಿ ಶ್ರೀ
ಭೂ ಖಂಡದ 200 ದೇಶಗಳ ಪೈಕಿ ಭಾರತ ಹೆಚ್ಚು ತರುಣರನ್ನೇ ಹೊಂದಿದೆ. ಆದರೆ, ದೇಶದ ತಾರುಣ್ಯದ ಸ್ಥಿತಿ ಹೇಗಿದೆ ಎಂಬುದನ್ನು ಆಲೋಚಿಸಬೇಕಿದೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿರುವಂತೆ ಭಾರತೀಯರು ಎಲ್ಲ ಕ್ರೀಡೆಯ ಉತ್ತಮ ಪ್ರೋತ್ಸಾಹಕರು. ಆದರೆ. ಉತ್ತಮ ಅಭ್ಯಾಸಗಾರರಲ್ಲ.
ನೀರಾವರಿ ಇಲಾಖೆ ಎಂಜಿನಿಯರ್ ಅಚಾತುರ್ಯ: ಕಟಾವು ಮಾಡಿದ್ದ ಭತ್ತದ ಪ್ರದೇಶಕ್ಕೆ ನುಗ್ಗಿದ ಕೆರೆ ನೀರು
ನೀರಾವರಿ ಇಲಾಖೆ ಎಂಜಿನಿಯರ್ ಅವರ ಅಚಾತುರ್ಯದಿಂದ ಕೆರೆ ನೀರು ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿದ್ದ ಭತ್ತದ ಬೆಳೆ ಪ್ರದೇಶಕ್ಕೆ ನುಗ್ಗಿ ಅಪಾರ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಘಟಿಸಿದೆ. ಸಕಾಲದಲ್ಲಿ ರೈತರು ಮರಳಿನ ಚೀಲ ಹಾಕಿ ತೂಬನ್ನು ಮುಚ್ಚಿದ ಪರಿಣಾಮ ಕೆರೆ ಒಡೆದು ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ.
ನಾಳೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನ, ಸಂಸ್ಮರಣೆ
ಹಲವು ದಶಕಗಳಿಂದ ನಾಡಿನಲ್ಲಿ ಅಪಾರ ಸಂಖ್ಯೆಯಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ರೈತರ ಸಮಸ್ಯೆಗಳನ್ನು ಕೆಂದ್ರೀಕರಿಸಿ ಬಂದಿರುವ ಚಿತ್ರಗಳು ಕಡಿಮೆ. ಡಾ.ರಾಜ್ ಅಭಿನಯದ ಕಾಮನ ಬಿಲ್ಲು, ಸಿ.ಪಿ.ಯೋಗೇಶ್ವರ್ ಅವರ ಉತ್ತರ ದ್ರುವದಿಂದ ದಕ್ಷಿಣ ದ್ರುವಕೂ ಹಾಗೂ ಸಂಕ್ರಾಂತಿ ಚಿತ್ರಗಳಲ್ಲಿ ಒಂದಷ್ಟು ರೈತ ಪರವಾದ ಧ್ವನಿ ಇರುವುದನ್ನು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ರೈತರ ಬಗ್ಗೆ ಇರುವ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕಡಿಮೆ.
  • < previous
  • 1
  • ...
  • 856
  • 857
  • 858
  • 859
  • 860
  • 861
  • 862
  • 863
  • 864
  • ...
  • 903
  • next >
Top Stories
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ಅಪ್ಪಟ ಗ್ರಾಮೀಣ ಸೊಗಡಿನ ರಾಜಕಾರಣಿ ಮೇಟಿ ಇನ್ನಿಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved