ಅಂಬೇಡ್ಕರ್ ನೀಡಿದ ಸಂವಿಧಾನ ಪ್ರಪಂಚಕ್ಕೆ ಮಾದರಿ: ಶಾಸಕ ದರ್ಶನ್ ಪುಟ್ಟಣ್ಣಯ್ಯಭಾರತದ ಜಿಡಿಪಿ 3.5ಮಿಲಿಯನ್ ಡಾಲರ್ ಇದೆ. ಮುಂದಿನ 2030ಕ್ಕೆ 7.3ಕ್ಕೆ ಏರಿಕೆಯಾಗಲಿದೆ. ಆ ಮೂಲಕ ಪ್ರಪಂಚದಲ್ಲಿಯೇ ಅತಿಹೆಚ್ಚು ಜೆಡಿಪಿ ಹೊಂದಿದ 3ನೇ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ. ಇದು ದೇಶದ ಗೌರವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ಸಮಾನತೆ ಎಂಬ ಅಡಿಯಲ್ಲಿ ಸಂವಿಧಾನವನ್ನು ರಚಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ಬದುಕು ರೂಪಿಸಿಕೊಡಲಾಗಿದೆ.