ಆಧ್ಯಾತ್ಮಿಕ ಮಾರ್ಗಕ್ಕೆ ವಚನ ಸಾಹಿತ್ಯ ಸಹಕಾರಿ: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಕ್ತಿ ಹುಟ್ಟಲು ಕಾಯಕ ಇರಲೇಬೇಕು. ದೇವಾಲಯದ ಪೂಜೆಯಿಂದ ಹುಟ್ಟುವುದಿಲ್ಲ, ಕಾಯಕದಿಂದ ಕೈಲಾಸ ಎಂಬುದನ್ನು ಪ್ರತಿಪಾದಿಸಿದ್ದಾರೆ. ವ್ರತ ಎಂದರೆ ಮನೋವಿಕಾರವಾಗದಂತೆ ಇರಲು ಕಟ್ಟಿರುವ ಗೂಟ. ಪಾಂಡಿತ್ಯದ ಅನಾವರಣ ಆಗುತ್ತಿದೆ. ವಿದ್ಯಾರ್ಥಿಗಳ ವಿಕಾಸ ಆಗುತ್ತಿದೆಯೇ ಶಿಕ್ಷಣದಲ್ಲಿ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ.