ಕಲಿಕೆ-ನಾವೀನ್ಯತೆ ಸಮ್ಮಿಲನ ಅಗತ್ಯ: ವೆಂಕಪ್ಪಯ್ಯ ಆರ್, ದೇಸಾಯಿಪದವಿ ಶಿಕ್ಷಣವೂ ಒಂದು ಚೌಕಟ್ಟಿನೊಳಗೆ ಇರುತ್ತದೆ. ಆದರೆ ನಾವು ಒಂದು ಸಮಸ್ಯೆಯನ್ನು ಪರಿಹರಿಸಲು ಬಯಸಿದಾಗ ಆ ಚೌಕಟ್ಟನ್ನು ದಾಟಿ ಹೋಗಬೇಕಾಗುತ್ತದೆ. ಇದಕ್ಕಾಗಿ ತರಗತಿಯ ಆಚೆಗೂ ಯೋಚನೆ ಮಾಡುವ ಅವಶ್ಯಕತೆ ಇರುತ್ತದೆ. ಇಂತಹ ಆಲೋಚನೆಗಳು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುವುದಲ್ಲದೇ ಅವರ ಭವಿಷ್ಯಕ್ಕೆ ಏಣಿಯಾಗುತ್ತದೆ.