ಮೈಸೂರಿನ ಪಂಜಿನ ಕವಾಯತು ಮೈದಾನವೆಲ್ಲಾ ಹೊಂಬೆಳಕಿನ ಚಿತ್ತಾರ...!ಲೇಸರ್ ಶೋ ಮೂಲಕ ರಾಜ್ಯದ ವೈಭವವನ್ನು ತೋರಿಸಲಾಯಿತು. ಮೈಸೂರು ಅರಮನೆ, ವಿಜಯನಗರದ ಕಲ್ಲಿನ ರಥ, ಶಿಲಾಬಾಲಕಿ, ಸೋಮನಾಥಪುರ ಚೆನ್ನಕೇಶವ ದೇವಾಲಯ, ಶ್ರವಣ ಬೆಳಗೊಳ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ, ಗೋಲಗುಮ್ಮಟ, ಜೋಗ್ ಜಲಪಾತ, ಯಕ್ಷಗಾನ, ಉಳುಮೆ ಮಾಡುತ್ತಿರುವ ರೈತ, ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ಸರ್.ಎಂ. ವಿಶ್ವೇಶ್ವರಯ್ಯ, ಡಾ. ರಾಜ್ ಕುಮಾರ್, ಡಾ. ಪುನೀತ್ ರಾಜ್ ಕುಮಾರ್, ವಿಧಾನಸೌಧ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಚಿತ್ರಣವನ್ನು ಲೇಸರ್ ಬೆಳಕಿನಲ್ಲಿ ಮೂಡಿ ಬಂದವು.