ಕನ್ನಡ ಪರಿಚಾರಕರೆಲ್ಲರೂ ಸಮ್ಮೇಳನಾಧ್ಯಕ್ಷತೆಗೆ ಅರ್ಹರು: ಸಾಹಿತಿ ಬನ್ನೂರು ಕೆ. ರಾಜುಸಾಹಿತಿಗಳು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂದು ಕೆಲವು ಮಂದಿ ಕೂಗೆಬ್ಬಿಸುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಕನ್ನಡ ಮತ್ತು ಕನ್ನಡ ಸಾಹಿತ್ಯ ಉಳಿದಿರುವುದೇ ಕನ್ನಡ ಹೋರಾಟಗಾರರು ಹಾಗೂ ಕನ್ನಡ ಪರಿಚಾರಕರಿಂದ ಮಾತ್ರ. ವಸ್ತುಸ್ಥಿತಿ ಹೀಗಿರುವಾಗ ಕನ್ನಡ ಹೋರಾಟಗಾರರು, ಕನ್ನಡ ಪರಿಚಾರಕರನ್ನೂ ಸಮ್ಮೇಳನಾಧ್ಯಕ್ಷರನ್ನಾಗಿಸಲು ಪರಿಗಣಿಸಬೇಕು .