ಸ್ತಬ್ಧಚಿತ್ರಗಳಲ್ಲಿ ನಾಡಿನ ಪ್ರಗತಿ, ಪ್ರವಾಸೋದ್ಯಮ, ಪರಂಪರೆ, ಇತಿಹಾಸ ಅನಾವರಣ...ದಸರಾ ಜಂಬೂಸವಾರಿಯಲ್ಲಿ 51 ಸ್ತಬ್ಧಚಿತ್ರಗಳು ತಮ್ಮ ತಮ್ಮ ಇಲಾಖೆ ಮತ್ತು ಆಯಾ ಜಿಲ್ಲೆಯ ಪರಿಚಯ ಮಾಡಿಕೊಟ್ಟವು. ಪ್ರಮುಖ ಯಾತ್ರಾ ಸ್ಥಳಗಳು, ಪ್ರಮುಖ ದೇವಾಲಯಗಳು, ಗಿರಿಧಾಮಗಳು, ಕಲೆ, ಸಂಸ್ಕೃತಿ, ವೈಜ್ಞಾನಿಕ ಕೊಡುಗೆ, ಸರ್ಕಾರದ ಜನಪರ ಯೋಜನೆಗಳು ಹೀಗೆ ಒಂದೊಂದು ಬಗೆಯ ಮಾಹಿತಿ ನೀಡುವ ಮೂಲಕ ಜನಗಳ ಮನಗೆದ್ದಿತು. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ನಾಡಿನ ವೈಭವ ಸಾರಿದವು.