ಹೊಸಗನ್ನಡ ಸಾಹಿತ್ಯವೂ ಜನ ಸಾಮಾನ್ಯರ ಧ್ವನಿ: ಪ್ರೊ.ಎಂ.ನಂಜಯ್ಯ ಹೊಂಗನೂರುಸಾಮಾನ್ಯ ಜನರು ಬರೆಯುವ ಹಾಗೂ ಓದುವ ಸಾಹಿತ್ಯವೆಂದರೆ ಅದು ಹೊಸಗನ್ನಡ ಸಾಹಿತ್ಯ. ಇಲ್ಲಿ ದಲಿತ ಹಿಂದುಳಿದ ಆದಿವಾಸಿ ಮತ್ತು ಮಹಿಳಾ ಸಂವೇದನೆ ಜೀವಂತವಾಗಿ ಹರಿದು ಬಂದಿದೆ. ದನಿ ಇಲ್ಲದ ಅಲಕ್ಷಿತ ಹಾಗೂ ಎಲ್ಲ ಸ್ತರದ ಜನರನ್ನು ಹೊಸಗನ್ನಡ ಸಾಹಿತ್ಯ ಮುಖಾಮುಖಿಯಾಗಿಸಿದೆ. ತಳಸ್ತರದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ.