ಫಸಲು ನಾಶಕ್ಕೆ ಪರಿಹಾರ ನೀಡುವಂತೆ ರೈತ ಸಂಘದ ಒತ್ತಾಯನಂಜನಗೂಡು: ಕಬಿನಿ ಅಣೆಕಟ್ಟೆಯಿಂದ 22 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಿದ್ದರಿಂದ ತಾಲೂಕಿನ ರಾಂಪುರ, ಹುಲ್ಲಹಳ್ಳಿ ನಾಲೆಗಳ ಬಯಲಿನಲ್ಲಿ ರೈತರು ಬೆಳೆದ ಫಸಲು ಜಾಲಾವೃತಗೊಂಡು ಹಾಳಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.