ನಾದಬ್ರಹ್ಮ ಸಭಾಂಗಣದಲ್ಲಿ ಅಲೆ ಅಲೆಯಾಗಿ ತೇಲಿ ಬಂದ ಭಾವ ತರಂಗ....ಬಾ ಇಲ್ಲಿ ಸಂಭವಿಸು, ಎಲ್ಲೋ ಹುಡುಕಿದೆ ಇಲ್ಲದ ದೇವರ, ಸೋಜುಗಾದ ಸೂಜಿ ಮಲ್ಲಿಗೆ, ಕೋಲುಮಂಡೆ ಜಂಗಮದೇವ, ಒಂದಿರುಳು ಕನಸಿನಲ್ಲಿ, ಕಾಣದ ಕಡಲಿಗೆ, ಭಾಗ್ಯದ ಬಳೆಗಾರ, ತೇರ ಏರಿ ಅಂಬರದಾಗೆ- ಇವೇ ಮೊದಲಾದ ಗೀತೆಗಳಿಗೆ ಕಿಕ್ಕಿರಿದ ನೆರೆದಿದ್ದ ಸಭಿಕರಿಂದ ದೀರ್ಘ ಕರತಾಡನದ ಮೂಲಕ ಅಪಾರ ಮೆಚ್ಚುಗೆ ವ್ಯಕ್ತವಾಯಿತು.