ಛತ್ರಪತಿ ಶಿವಾಜಿ ಅವರ ಧೈರ್ಯ, ಶೌರ್ಯ, ದೇಶಪ್ರೇಮ ಯುವಕರಿಗೆ ಸ್ಫೂರ್ತಿದಾಯಕ: ಶಿವಕುಮಾರ್ ಕಾಸ್ನೂರುತನ್ನ ತಾಯಿಯಿಂದ ರಾಜ್ಯದ ಆಡಳಿತ, ದೇಶಪ್ರೇಮದ ಪಾಠವನ್ನು ಕಲಿತ ಶಿವಾಜಿ ಅವರು ಧರ್ಮರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ನ್ಯಾಯಪರತೆ, ಸ್ವರಾಜ್ಯದ ಕಲ್ಪನೆ, ದೇಶಭಕ್ತಿಯ ಆದರ್ಶ ಗುಣಗಳನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅವರ ದೇಶಪ್ರೇಮ ಮತ್ತು ಶೌರ್ಯ ಆದರ್ಶ ಗುಣಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾಯಿಯಾಗಿದ್ದಾರೆ.