ಮೈಸೂರು: ವಿಸ್ತರಣೆಗೊಂಡ ಅಶೋಕಪುರಂ ರೈಲ್ವೆ ನಿಲ್ದಾಣ ಉದ್ಘಾಟನೆನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 11 ಪ್ಲಾಟ್ ಫಾರ್ಮ್ ಇರುವುದರಿಂದ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಒತ್ತಡ ಕಡಿಮೆ ಆಗಲಿದೆ. ಪ್ರಯಾಣಿಕರ ದಟ್ಟಣೆ ನಿವಾರಿಸುವ ಪರ್ಯಾಯ ನಿಲ್ದಾಣವಾಗಿ ಮಾರ್ಪಟ್ಟಾಗಿದೆ. ಬೆಂಗಳೂರಿನಿಂದ ಬರುವ ರೈಲುಗಳ ಸೇವೆ ವಿಸ್ತರಣೆ ಆಗಲಿದ್ದು, 4, 5, 6ನೇ ಪ್ಲಾಟ್ ಫಾರ್ಮ್ ಪೂರ್ಣ ಪ್ರಮಾಣದ ಮೇಲ್ಛಾವಣಿಯೊಂದಿಗೆ ಪ್ರಯಾಣಿಕರಿಗೆ ಸುರಕ್ಷತೆ ನೀಡುತ್ತದೆ.