ಹಾವಿಗೆ ಹಾಲು ನೀಡದೇ ರೋಗಿಗಳಿಗೆ ಹಾಲು ವಿತರಿಸಿ ಬಸವ ಪಂಚಮಿ ಆಚರಣೆಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯಲಕ್ಷ್ಮಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯಿಂದ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಣ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಆದರೂ ಹಾಲನ್ನು ಹುತ್ತಕ್ಕೆಎರೆದು ಹಾಳು ಮಾಡುತಿದ್ದೇವೆ. ಆದರೆ ದೇಶದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತಿದ್ದಾರೆ. ಈ ಹಾಲಿನಲ್ಲಿ ಕಾರ್ಬೋಹೈಡೆಟ್, ಪ್ರೋಟೀನ್ ಸೇರಿದಂತೆ ಮಕ್ಕಳಿಗೆ ಏನು ಬೇಕು ಅದೆಲ್ಲ ಇರುತ್ತೆ. ಹಾಲನ್ನು ವೇಸ್ಟ್ ಮಾಡದೆ ಒಳ್ಳೆ ಉದ್ದೇಶಕ್ಕೆ ಬಳಸಿದರೆ ಸಾರ್ಥಕವಾಗುತ್ತದೆ ಎಂದರು.