ಐತಿಹಾಸಿಕ ಹೊಸಹೊಳಲು ಗ್ರಾಮದಲ್ಲಿ ಹನುಮಂತೋತ್ಸವ ಸಂಭ್ರಮಮೆರವಣಿಗೆಯಲ್ಲಿ ಕೇರಳದ ಚಂಡೆ ವಾದನ, ಮ್ಯೂಸಿಕ್ ಟ್ಯಾಬ್ಲೋನ ಹಾಡಿಗೆ ಯುವಕರು, ಯುವತಿಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ಲಕ್ಷ್ಮಿಸಾಗರದ ಕೆಂಪೇಗೌಡ ಮತ್ತು ತಂಡದ ವತಿಯಿಂದ ನಾಸಿಕ್ ಬ್ಯಾಂಡ್, ಮಂಡ್ಯದ ಕನ್ಯಾಕುಮಾರ್ ಅವರಿಂದ ಪೂಜಾಕುಣಿತ, ವೀರಗಾಸೆ, ಹುಲಿವೇಶ, ಪಾಲೇ ಗಿರಿವೇಶದಂತಹ ಪ್ರದರ್ಶನಗಳನ್ನು ಕಲಾವಿದರು ಪ್ರದರ್ಶಿಸಿ ಸಾರ್ವಜನಿಕರನ್ನು ರಂಜಿಸಿದರು.