ಜನರ ಸಂತಸ ಇಮ್ಮಡಿಗೊಳಿಸಿದ ದೀಪಾವಳಿಧಾರವಾಡದ ಮಲೆನಾಡು ಪ್ರದೇಶದ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಎತ್ತು-ದನಕರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ಪಾಡ್ಯೆ ದಿನ ಬುಧವಾರ ಎತ್ತುಗಳನ್ನು ತೊಳೆದು, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಹೂವು, ಬಲೂನ್, ರಿಬ್ಬನ್ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಲಾಯಿತು.