ಮಾದಕ ವ್ಯಸನ ಪ್ರೋತ್ಸಾಹಿಸುವ ಜಾಹೀರಾತುಗಳ ನಿಯಂತ್ರಿಸಬೇಕುಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಉದ್ದಿಮೆಗಳನ್ನು ವೃದ್ದಿ ಮಾಡಿಕೊಳ್ಳಲು ಮಾಲೀಕರು ಯುವಕ, ಯುವತಿಯರನ್ನೇ ಗುರಿಯಾಗಿಸಿಕೊಂಡು ಜಾಹೀರಾತುಗಳ ಮೂಲಕ ಪರ್ಯಾಯವಾಗಿ ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಇದರ ನಿಯಂತ್ರಣಕ್ಕೆ ಬದ್ಧತೆ ತೋರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.