ಪ್ರವಾಸೋದ್ಯಮ ಇಲಾಖೆಗೆ ಐತಿಹಾಸಿಕ ದೇವಸ್ಥಾನಗಳ ಸೇರಿಸಲು ಆಗ್ರಹಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಅನೇಕ ಐತಿಹಾಸಿಕ ಮಠ. ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಸೇರಿಸಿದ್ದು ಸ್ವಾಗತಾರ್ಹವಾಗಿದ್ದು, ಇವುಗಳ ಜತೆಗೆ ಮುಂಡರಗಿ ತಾಲೂಕಿನ ಬಿದರಳ್ಳೆಮ್ಮ, ಗೋಣಿಬಸವೇಶ್ವರ, ರಸಲಿಂಗು ದೇವಸ್ಥಾನ, ಮುಂಡರಗಿ ತೋಂಟದಾರ್ಯ ಮಠವನ್ನು ಸಹ ಒಳಪಡಿಸಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಒತ್ತಾಯಿಸಿದ್ದಾರೆ.