ರಂಗಭೂಮಿ ಕಲಾಸಂತ ಬಾಬಣ್ಣ ಕಲ್ಮನಿ ನಿಧನಕುಕನೂರು ಪಟ್ಟಣದ ಹಿರಿಯ ರಂಗಭೂಮಿ ಕಲಾ ಸಂತ ಬಾಬಣ್ಣ ಕಲ್ಮನಿ (ಜಲಾಲುದ್ದೀನ್) (89) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಜರುಗಿತು. ಗಣ್ಯರು, ಮುಖಂಡರು, ಕಲಾವಿದರು ಬಾಬಣ್ಣ ಅವರ ಅಗಲಿಕೆಗೆ ಕಂಬನಿ ಮಿಡಿಸಿದರು. ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.