ಶತಮಾನದ ಕೆರೆಗೆ ಜೀವ ಕಳೆಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂಪಿಸಿರುವ "ಅಮೃತ ಸರೋವರ " ಅಭಿಯಾನ ಇಂದು ಫಲ ನೀಡಿದ್ದು, ಈ ಬರಗಾಲದಲ್ಲಿ ರೈತರಿಗೆ ಆಸರೆಯಾಗಿದೆ.ಈ ಅಭಿಯಾನದಿಂದ ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಶತಮಾನದ ಕೆರೆಗೆ ಜೀವ ಕಳೆ ಬಂದಿದೆ. ಬರಗಾಲದ ಈ ಸಂದರ್ಭದಲ್ಲಿ ನೀರಿನ ಬವಣೆ ನೀಗಿಸಿದೆ. ೨೦೨೨-೨೩ನೇ ಸಾಲಿನಲ್ಲಿ ಕೈಗೊಂಡ ಈ ಕಾಮಗಾರಿಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಜನತೆ ಕೈ ಜೋಡಿಸಿದ್ದರು.