ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ-ದಾರುಕೇಶಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಚಂದ್ರಯಾನ -2 ಉಡಾವಣೆ ಯಶಸ್ವಿಗೊಳಿಸಿದ ಇಸ್ರೋ ತಂಡದ ಪ್ರಮುಖ ಸದಸ್ಯ, ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ಹೇಳಿದರು. ಕಲಿಕಾ ವಿಷಯವಾಗಿ ವಿಜ್ಞಾನದ ಮಹತ್ವ ಅಪಾರ. ಜಗತ್ತಿನಲ್ಲಿನ ಎಲ್ಲ ಹುದ್ದೆಗಳನ್ನು ವಿದ್ಯಾರ್ಥಿಗಳು ಪಟ್ಟಿಮಾಡಿ, ಆ ವಿಷಯದ ಬಗ್ಗೆ ಒಂದು ಪುಟ ಟಿಪ್ಪಣಿ ಮಾಡಿ, ನಂತರ ಸಾಧನೆ ಮಾಡಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ವಿಜ್ಞಾನ ಇಂದು ತುಂಬ ಮುಂದುವರಿದಿದೆ. ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಭೂಮಿ ನಮಗೆ ತೊಟ್ಟಿಲು ಇದ್ದಂತೆ. ಬದುಕ ಬೇಕಾದರೆ ಕೆಳಗಿಳಿಯಲೇಬೇಕು. ಭವಿಷ್ಯದಲ್ಲಿ ಮಂಗಳಗ್ರಹ, ಚಂದ್ರನಲ್ಲಿ ಮಾನವನ ವಾಸ್ತವ್ಯದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.