ಉಣಕಲ್ ಕೆರೆ ಉಳಿಸಿ ಜನಾಂದೋಲನಕ್ಕೆ ಸಿದ್ಧತೆಬರೋಬ್ಬರಿ 240 ಎಕರೆ ಪ್ರದೇಶದಲ್ಲಿ ಈ ಕೆರೆ ವ್ಯಾಪಿಸಿದೆ. ಹುಬ್ಬಳ್ಳಿ- ಧಾರವಾಡದ ಮಧ್ಯದಲ್ಲಿರುವ ಈ ಕೆರೆ ಮಹಾನಗರದ ಸೌಂದರ್ಯ ಹೆಚ್ಚಿಸಲು ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಕೆರೆಯ ಸುತ್ತಮುತ್ತಲಿನ ಬಡಾವಣೆ, ಅಚ್ಚುಕಟ್ಟು ಪ್ರದೇಶಗಳಲ್ಲಿನ ಬಡಾವಣೆಗಳ ಚರಂಡಿ ನೀರೆಲ್ಲ ಕೆರೆಗೆ ಸೇರ್ಪಡೆಯಾಗುತ್ತಿದೆ.