ಅಕ್ಷಯ ತೃತೀಯ: ಚಿನ್ನಾಭರಣ ಮಳಿಗೆಯಲ್ಲಿ ಭರ್ಜರಿ ವಹಿವಾಟುಕೆಲವು ಆಭರಣ ಮಳಿಗೆಗಳಲ್ಲಿ ಆಕ್ಷಯ ತೃತೀಯಗೆಂದು ವಿಶೇಷ ಕೊಡುಗೆಗಳನ್ನು ನೀಡಲಾಗಿತ್ತು. ಗ್ರಾಹಕರನ್ನು ಆಕರ್ಷಿಸಲು ಚಿನ್ನ, ಹರಳು, ವಜ್ರಾಭರಣಗಳ ಮೇಲೆ ಒಂದಷ್ಟು ರಿಯಾಯಿತಿ, ಮೇಕಿಂಗ್ ಶುಲ್ಕ ಕಡಿತ ಇತ್ಯಾದಿ ಕೊಡುಗೆ ನೀಡಲಾಗಿತ್ತು. ಈ ಬಾರಿಯ ಅಕ್ಷಯ ತೃತೀಯದಂದು ನಿರೀಕ್ಷೆಯಂತೆ ಉತ್ತಮ ಖರೀದಿ ನಡೆಯಿತು. ಕಳೆದ ಒಂದು ವಾರದಿಂದ ಬುಕ್ಕಿಂಗ್ ಕೂಡ ಉತ್ತಮವಾಗಿತ್ತು.