‘ಸನಾತನ ವಾಣಿ’ ಬಹುಭಾಷಾ ಪ್ರಸಾರಕ್ಕೆ ಎಐ ತಂತ್ರಜ್ಞಾನ‘ಸನಾತನ ವಾಣಿ’ಯನ್ನು ಎಐ ತಂತ್ರಜ್ಞಾನದ ಮೂಲಕ ಬಹು ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು. ಈ ಮೂಲಕ ಎಲ್ಲರಿಗೂ ಅಧ್ಯಾತ್ಮಿಕ ಸಂದೇಶಗಳು ತಲುಪಲಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್ ನನ್ನ ಧ್ವನಿಯನ್ನು ಬಹುಭಾಷೆಗಳಲ್ಲಿ ಬರುವಂತೆ ಮಾಡುತ್ತದೆ. ಸ್ಪೇನ್, ಜರ್ಮನಿ, ಡಚ್, ರಷ್ಯಾ, ಇಟಲಿ ಹೀಗೆ ಹಲವಾರು ಭಾಷೆಗಳಲ್ಲಿ ನನ್ನ ಉಪನ್ಯಾಸಗಳನ್ನು ಆಲಿಸಬಹುದಾಗಿದೆ.