ಶ್ರೀರಾಮ ಜಯಂತಿ ಅಂಗವಾಗಿ ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಶ್ರೀರಾಮನವಮಿಯನ್ನು ಎಲ್ಲೆಡೆ ಸಡಗರ, ಸಂಭ್ರಮದಿಂದ ಕೂಡಿತ್ತು. ಪಟ್ಟಣದ ಗಂಗಾಮತ ಬೀದಿ ಅಡ್ಡೇನಿಂಗಯ್ಯನಕೇರಿಗೆ ಬಂದು ಸ್ಥಾಪಿಸಿದ ಸಿದ್ದಪ್ಪಾಜಿ ಮತ್ತು ಸೀತಾ ರಾಮಮಂದಿರದಲ್ಲಿ ಶ್ರೀರಾಮ ನವಮಿ ಹಿನ್ನಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು. ಬೆಳಗ್ಗೆಯಿಂದಲೇ ಶ್ರೀರಾಮ, ಸಿದ್ದಪ್ಪಾಜಿ, ಗದ್ದಿಗೆ, ಅರಸಮ್ಮ ದೇವತೆಗಳಿಗೆ ಅಭಿಷೇಕ ನಂತರ ವಿವಿಧ ಬಗೆಯ ಹೂವಿನಿಂದ ಅಲಂಕಾರ ಪೂಜಾ ಕೈಂಕರ್ಯಗಳನ್ನು ನರೆವೇರಿಸಲಾಯಿತು.