ನರೇಂದ್ರ ಮೋದಿ ಕೊಡುಗೆ ದೇಶಕ್ಕೆ ಶೂನ್ಯಕಾಂಗ್ರೆಸ್ ಪಕ್ಷವು ರೈತರು, ಬಡವರು, ಮಹಿಳೆಯರು, ಯುವಕರ ಪರ ಕೆಲಸ ಮಾಡುತ್ತಿದ್ದು, ನುಡಿದಂತೆ ನಡೆಯುತ್ತಿದೆ. ಆದರೆ ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವರ ಕೊಡುಗೆ ದೇಶಕ್ಕೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.