ಕಲಬುರಗಿ ಉರಿ ಬಿಸಿಲಿಗೆ ಬಸವಳಿದ ಜನ ತತ್ತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆ ಶಾಖ ತರಂಗ ಸುಳಿಯಲ್ಲಿ ಸಿಲಕಿ ನಲುಗುತ್ತಿದೆ.ಕಳೆದ ಒಂದು ವಾರದಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಶುರುವಾಗಿರುವ ಶಾಖ ತರಂಗಗಳ ಹಾವಳಿ, ನಿರಂತರ ಉಷ್ಣದ ಅಲೆಗಳು, ಉರಿ ಬಿಸಿಲಿನ ಉಪಟಳದಿಂದ ಜನಜೀವನ ತತ್ತರಿಸಿದೆ.