ಭೋವಿ ಸಚಿವರ ನಿಂದಿಸಿರುವ ಸಿ.ಟಿ.ರವಿ ಕ್ಷಮೆ ಕೇಳಲಿಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ಪವಿತ್ರವಾದ ಭಾರತೀಯ ಸಂಸ್ಕೃತಿಯು ನಮ್ಮದಾಗಿದೆ. ಹೀಗಿರುವಾಗ ಬಿಜೆಪಿಯ ನಾಯಕ ಸಿ.ಟಿ.ರವಿ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ತಾಲೂಕು ಭೋವಿ ಸಮಾಜ ಅಧ್ಯಕ್ಷ ಗರಗ ರಾಜಪ್ಪ ಚನ್ನಗಿರಿಯಲ್ಲಿ ದೂರಿದ್ದಾರೆ.