ವಿಜೃಂಭಣೆಯಿಂದ ಗ್ರಾಮದೇವತೆ ದೊಡ್ಡಮ್ಮತಾಯಿ ವಾರ್ಷಿಕ ಹಬ್ಬಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ತಮಟೆ ನಗಾರಿಯ ಸದ್ದಿನೊಂದಿಗೆ ಗ್ರಾಮದ ಬಲಮುರಿ ಗಣಪತಿ ದೇವಾಲಯ ಪ್ರದಕ್ಷಿಣೆ ಮಾಡಿ ಶ್ರೀದೊಡ್ಡಮ್ಮತಾಯಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದರು. ಬಳಿಕ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಆರತಿ ಬೆಳಗುವ ಮೂಲಕ ಮಹಿಳೆಯರು ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು.