ಎಲ್ಲ ವರ್ಗದವರನ್ನು ಸಮಾನವಾಗಿ ಕಂಡಿರುವ ಜನತೆಕಾಂಗ್ರೆಸ್ ಪಕ್ಷವು 1952 ರಲ್ಲಿ ಒಕ್ಲಲಿಗ ಜನಾಂಗದ ಎಚ್.ಸಿ. ದಾಸಪ್ಪ ಅವರಿಗೆ ಟಿಕೆಟ್ ನೀಡಿತ್ತು. ಅವರು ಕೆಎಂಪಿಪಿ ಅಭ್ಯರ್ಥಿಯಾಗಿದ್ದ ವೀರಶೈವ ಜನಾಂಗದ ಎಂ.ಎಸ್. ಗುರುಪಾದಸ್ವಾಮಿ ಅವರ ಎದುರು ಸೋತಿದ್ದರು. ದ್ವಿಸದಸ್ಯ ಕ್ಷೇತ್ರದಲ್ಲಿ ಪ.ಜಾತಿ ಎಡಗೈನ ಎನ್. ರಾಚಯ್ಯ ಗೆದ್ದಿದ್ದರು. ನಂತರ 1957 ರಲ್ಲಿ ದೇವಾಂಗ ಜನಾಂಗದ ಎಂ. ಶಂಕರಯ್ಯ, ಪ.ಜಾತಿ ಬಲಗೈನ ಎಸ್.ಎಂ. ಸಿದ್ದಯ್ಯ ಅವರಿಗೆ ಟಿಕೆಟ್ ನೀಡಿತ್ತು. ಇಬ್ಬರು ಗೆದ್ದಿದ್ದರು. 1962 ರಲ್ಲಿ ದೇವಾಂಗ ಜನಾಂಗದ ಎಂ. ಶಂಕರಯ್ಯ ಪುನಾರಾಯ್ಕೆಯಾದರು.