ಜಲಜೀವನ್ ಮಿಷನ್ ಸರ್ಕಾರಗಳ ಮಹತ್ವದ ಯೋಜನೆ: ಶಾಸಕ ಬೇಳೂರುರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಪ್ರತಿ ಹಳ್ಳಿಯ, ಪ್ರತಿ ಮನೆಗೆ ನೀರು ಪೂರೈಸುವ ಭಗೀರಥ ಪ್ರಯತ್ನ ಇದಾಗಿದೆ. ಈ ಯೋಜನೆಯ ಅನುಷ್ಠಾನ ಭಾಗಶಃ ಆಗಿದೆ. ಕೊಳವೆ, ಕೊಳಾಯಿಗಳ ಜೋಡಣೆ ಕಾರ್ಯ ಮುಗಿದಿದೆ. ಕೆಲವು ಕಡೆಗಳಲ್ಲಿ ನೀರಿನ ಟ್ಯಾಂಕ್ ಸಹ ನಿರ್ಮಾಣ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೊಸನಗರದಲ್ಲಿ ಹೇಳಿದ್ದಾರೆ.