ಬೇರೆಡೆಗೆ ಬೀದಿ ನಾಯಿಗಳ ಸಾಗಿಸಲು ಆಗ್ರಹಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತ-ಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕುರಿ, ಮೇಕೆಗಳು ಬಲಿಯಾಗಿದ್ದು, ವಸತಿ ಪ್ರದೇಶದ ಜನರು ಭಯಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಟ್ಟಣದ ಪುರಸಭೆಯ ಮುಂದೆ ನಾಯಿಗಳ ದಾಳಿಯಿಂದ ಸಾವನಪ್ಪಿದ ಕುರಿ, ಮೇಕೆಗಳನ್ನು ಪುರಸಭೆ ಆವರಣದ ಮುಂದಿಟ್ಟು ಪ್ರತಿಭಟನೆ ನಡೆಸಿದರು.