ಕನ್ನಡ ಎಂ.ಎಯಲ್ಲಿ 10 ಚಿನ್ನದ ಪದಕ, 4 ನಗದು ಬಹುಮಾನ ಪಡೆದ ತೇಜಸ್ವಿನಿ4ನೇ ತರಗತಿ ಓದುವಾಗ ತಾಯಿ, ದ್ವಿತೀಯ ಪಿಯುಸಿ ಓದುವಾಗ ತಂದೆಯನ್ನು ಕಳೆದುಕೊಂಡಿದ್ದ ತೇಜಸ್ವಿನಿ, ಅವರ ಅಕ್ಕ ಮತ್ತು ತಮ್ಮ ಸೇರಿದಂತೆ ಮೂವರು ಅತ್ತೆ ಮನೆಯಲ್ಲಿ ಆಶ್ರಯ ಪಡೆದರು. ಬಳಿಕ ತೇಜಸ್ವಿನಿ ತಲಕಾಡಿನಲ್ಲಿ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಾಗೂ ಮಳವಳ್ಳಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪಿಯುಸಿಯನ್ನು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಇದ್ದುಕೊಂಡು ಪೂರೈಸಿದರು.