ನಾಳೆ ಮೈಸೂರು ವಿವಿ 104ನೇ ಘಟಿಕೋತ್ಸವ: 32249 ಮಂದಿಗೆ ಪದವಿ ಪ್ರದಾನಘಟಿಕೋತ್ಸವದಲ್ಲಿ 19992 ಮಹಿಳೆಯರು (ಶೇ.61.99), 12257 ಪುರುಷರು (ಶೇ.38) ಸೇರಿದಂತೆ ಒಟ್ಟು 32249 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ. 45 ಮಹಿಳೆಯರು ಮತ್ತು 55 ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ವಿವಿಧ ವಿಷಯಗಳಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 436 ಪದಕಗಳು ಮತ್ತು 266 ನಗದು ಬಹುಮಾನಗಳನ್ನು 252 ಅಭ್ಯರ್ಥಿಗಳು ಪಡೆದುಕೊಂಡಿದ್ದು, ಅವರಲ್ಲಿ 174 ಮಹಿಳೆಯರೇ ಇದ್ದಾರೆ.