ಶಾಲಾ ಶಿಕ್ಷಕರ ತುಲಾಭಾರ ಮಾಡಿದ್ದು ಇತಿಹಾಸಕನ್ನಡಪ್ರಭ ವಾರ್ತೆ ವಿಜಯಪುರ ಹಲಸಂಗಿ ಮದುರಚನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.